RWF Recruitment 2026: 192 ಅಪ್ರೆಂಟಿಸ್ ಹುದ್ದೆಗಳು – 10ನೇ, ITI ಪಾಸ್ ಮಾಡಿದವರಿಗೆ ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೋಗದ ದೊಡ್ಡ ಅವಕಾಶ!
ಬೆಂಗಳೂರುದಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಕರಿಗೆ ಸುವರ್ಣಾವಕಾಶ ಲಭ್ಯವಾಗಿದೆ. ಯಲಹಂಕದಲ್ಲಿರುವ Rail Wheel Factory (RWF) 2026ನೇ ಸಾಲಿನ ಅಪ್ರೆಂಟಿಸ್ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 192 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 10ನೇ ತರಗತಿ ಹಾಗೂ ITI ಪೂರ್ಣಗೊಳಿಸಿರುವವರಿಗೆ ಇದು ವಿಶೇಷ ಅವಕಾಶವಾಗಿದ್ದು, ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ತರಬೇತಿ ಪಡೆಯುವ ಮೂಲಕ ಭವಿಷ್ಯದ ಸ್ಥಿರ ಉದ್ಯೋಗದತ್ತ ಹೆಜ್ಜೆ ಇಡಬಹುದು.
ಈ ನೇಮಕಾತಿ ಪ್ರಕ್ರಿಯೆ ಸಂಪೂರ್ಣವಾಗಿ ಆಫ್‌ಲೈನ್ ಮೂಲಕ ನಡೆಯಲಿದೆ. ಆದ್ದರಿಂದ ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 01 ಏಪ್ರಿಲ್ 2026 ಆಗಿದೆ. ಸಮಯ ಮೀರಿದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಸಂಸ್ಥೆ ಹಾಗೂ ಹುದ್ದೆಗಳ ಸಂಕ್ಷಿಪ್ತ ಮಾಹಿತಿ
ಸಂಸ್ಥೆ ಹೆಸರು: Rail Wheel Factory (RWF)
ಒಟ್ಟು ಹುದ್ದೆಗಳು: 192
ಹುದ್ದೆ ಹೆಸರು: Apprentices
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಅರ್ಜಿ ವಿಧಾನ: ಆಫ್‌ಲೈನ್
ವೇತನ ಶ್ರೇಣಿ: ₹10,899 ರಿಂದ ₹12,261 ಪ್ರತಿ ತಿಂಗಳು
RWF ಭಾರತೀಯ ರೈಲ್ವೆಯ ಪ್ರಮುಖ ಘಟಕವಾಗಿದ್ದು, ರೈಲು ಚಕ್ರಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ಅಪ್ರೆಂಟಿಸ್ ತರಬೇತಿ ಪಡೆಯುವುದು ತಾಂತ್ರಿಕ ಕೌಶಲ್ಯವನ್ನು ಬೆಳೆಸಿಕೊಳ್ಳಲು ಅತ್ಯುತ್ತಮ ಅವಕಾಶವನ್ನ ನೀಡಲಾಗಿದೆ
ಟ್ರೇಡ್ ವೈಸ್ ಖಾಲಿ ಹುದ್ದೆಗಳ ವಿವರ
ಈ ನೇಮಕಾತಿಯಲ್ಲಿ ವಿವಿಧ ತಾಂತ್ರಿಕ ಟ್ರೇಡ್‌ಗಳಿಗೆ ಹುದ್ದೆಗಳು ಲಭ್ಯವಿವೆ. ಅವುಗಳ ವಿವರ ಕೆಳಗಿನಂತಿದೆ:
*️⃣ Fitter – 85 ಹುದ್ದೆಗಳು
*️⃣ Machinist – 31 ಹುದ್ದೆಗಳು
*️⃣ Mechanic (Motor Vehicle) – 8 ಹುದ್ದೆಗಳು
*️⃣ Turner – 5 ಹುದ್ದೆಗಳು
*️⃣ CNC Programming and Operator (COE Group) – 23 ಹುದ್ದೆಗಳು
*️⃣ Electrician – 18 ಹುದ್ದೆಗಳು
*️⃣ Electronic Mechanic – 22 ಹುದ್ದೆಗಳು
ಇವುಗಳಲ್ಲಿ Fitter ಟ್ರೇಡ್‌ಗೆ ಗರಿಷ್ಠ 85 ಹುದ್ದೆಗಳಿದ್ದು, ಸಂಬಂಧಿತ ITI ಮಾಡಿದ ಅಭ್ಯರ್ಥಿಗಳಿಗೆ ಹೆಚ್ಚು ಅವಕಾಶವನ್ನು ನೀಡಲಾಗಿದೆ . CNC ಹಾಗೂ Electronic Mechanic ಟ್ರೇಡ್‌ಗಳಿಗೂ ಸಾಕಷ್ಟು ಹುದ್ದೆಗಳಿವೆ.
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ಸಂಸ್ಥೆಯಿಂದ:
ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು
ಸಂಬಂಧಿತ ಟ್ರೇಡ್‌ನಲ್ಲಿ ITI ಪಾಸ್ ಮಾಡಿರಬೇಕು
ITI ಪ್ರಮಾಣಪತ್ರ ಸಂಬಂಧಿತ ಟ್ರೇಡ್‌ಗೆ ಹೊಂದಿಕೆಯಾಗಿರಬೇಕು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತಾ ಮಾನದಂಡಗಳನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ.
ವೇತನ ವಿವರ (ಟ್ರೇಡ್ ಆಧಾರಿತ)
RWF ಅಪ್ರೆಂಟಿಸ್ ಹುದ್ದೆಗಳಿಗೆ ಕೆಳಗಿನಂತೆ ಮಾಸಿಕ ವೇತನ ನೀಡಲಾಗುತ್ತದೆ:
₹12,261 ಪ್ರತಿ ತಿಂಗಳು: Fitter, Electrician, Electronic Mechanic
₹10,899 ಪ್ರತಿ ತಿಂಗಳು: Machinist, Mechanic (Motor Vehicle), Turner, CNC Programming & Operator
ತರಬೇತಿ ಅವಧಿಯಲ್ಲಿ ನೀಡಲಾಗುವ ಈ ಸ್ಟೈಪೆಂಡ್ ತಾಂತ್ರಿಕ ತರಬೇತಿ ಪಡೆಯುವವರಿಗೆ ಉತ್ತಮ ಆರ್ಥಿಕ ಬೆಂಬಲವಾಗುತ್ತದೆ.
ವಯೋಮಿತಿ ವಿವರ
ಕನಿಷ್ಠ ವಯಸ್ಸು: 15 ವರ್ಷ
ಗರಿಷ್ಠ ವಯಸ್ಸು: 24 ವರ್ಷ
(01-03-2024ರಂತೆ ಲೆಕ್ಕ)
ಸರ್ಕಾರಿ ನಿಯಮಾವಳಿಗಳ ಪ್ರಕಾರ SC/ST, OBC ಹಾಗೂ ಇತರೆ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯವಾಗುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ?
ಅಧಿಕೃತ ಪ್ರಕಟಣೆಯ ಪ್ರಕಾರ, ಅಭ್ಯರ್ಥಿಗಳ ಆಯ್ಕೆ ಸಾಮಾನ್ಯವಾಗಿ ಕೆಳಗಿನ ಆಧಾರದ ಮೇಲೆ ನಡೆಯುತ್ತದೆ:
🔷 10ನೇ ತರಗತಿ ಅಂಕಗಳು
🔷 ITI ಅಂಕಗಳು
ದಾಖಲೆ ಪರಿಶೀಲನೆ
ಯಾವುದೇ ಬರಹ ಪರೀಕ್ಷೆ ಅಥವಾ ಸಂದರ್ಶನ ಇರುವುದೇ ಎಂಬುದನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು. ಸಾಮಾನ್ಯವಾಗಿ ಅಪ್ರೆಂಟಿಸ್ ನೇಮಕಾತಿ ಮೆರಿಟ್ ಆಧಾರಿತವಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ – ಹಂತ ಹಂತವಾಗಿ
ಆಸಕ್ತ ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬೇಕು:
1. ಮೊದಲು RWF ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ.
2. ಅರ್ಜಿ ನಮೂನೆಯನ್ನು ಅಧಿಕೃತ ಅಧಿಸೂಚನೆಯಿಂದ ಡೌನ್‌ಲೋಡ್ ಮಾಡಿ.
3. ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಸ್ಪಷ್ಟವಾಗಿ ಭರ್ತಿ ಮಾಡಿ.
4. 10ನೇ ಮತ್ತು ITI ಪ್ರಮಾಣಪತ್ರಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಸೇರಿಸಿ.
5. ವಯೋಮಿತಿ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ) ಸೇರಿಸಿ.
6. ಇತ್ತೀಚಿನ ಪಾಸ್‌ಪೋರ್ಟ್ ಸೈಸ್ ಫೋಟೋ ಅಂಟಿಸಿ.
7. ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಕಳುಹಿಸಿ.
ಅರ್ಜಿ ಕಳುಹಿಸಬೇಕಾದ ವಿಳಾಸ
The Senior Personnel Officer-II
Personnel Department
Rail Wheel Factory
Yelahanka, Bangalore – 560 064
ಅರ್ಜಿಯನ್ನು Register Post ಅಥವಾ Speed Post ಮೂಲಕ ಕಳುಹಿಸುವುದು ಉತ್ತಮ. ಕೂರಿಯರ್ ಮೂಲಕ ಕಳುಹಿಸಿದರೂ ನಿಗದಿತ ದಿನಾಂಕದೊಳಗೆ ತಲುಪಬೇಕು.
ಪ್ರಮುಖ ದಿನಾಂಕಗಳು
ಅರ್ಜಿ ಪ್ರಾರಂಭ ದಿನಾಂಕ: 28 ಫೆಬ್ರವರಿ 2026
ಕೊನೆಯ ದಿನಾಂಕ: 01 ಏಪ್ರಿಲ್ 2026
ಕೊನೆಯ ದಿನಾಂಕದವರೆಗೆ ಕಾಯದೇ ಸಾಧ್ಯವಾದಷ್ಟು ಬೇಗ ಅರ್ಜಿ ಕಳುಹಿಸುವುದು ಸೂಕ್ತ.
ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ವಿಷಯಗಳು
1 ತಪ್ಪು ಮಾಹಿತಿ ನೀಡಿದರೆ ಅರ್ಜಿ ರದ್ದುಪಡಿಸಬಹುದು
2 ಎಲ್ಲಾ ದಾಖಲೆಗಳು ಸ್ವಯಂ ದೃಢೀಕೃತವಾಗಿರಬೇಕು
3 ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ
4 ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ
RWF ಅಪ್ರೆಂಟಿಸ್ ಯಾಕೆ ಉತ್ತಮ ಅವಕಾಶ?
✔ ಕೇಂದ್ರ ಸರ್ಕಾರದ ರೈಲ್ವೆ ಘಟಕದಲ್ಲಿ ತರಬೇತಿ
✔ ತಾಂತ್ರಿಕ ಕೌಶಲ್ಯ ಅಭಿವೃದ್ಧಿಗೆ ಅವಕಾಶ
✔ ಭವಿಷ್ಯದಲ್ಲಿ ಸರ್ಕಾರಿ ಅಥವಾ ಖಾಸಗಿ ಕ್ಷೇತ್ರದಲ್ಲಿ ಉತ್ತಮ ಉದ್ಯೋಗ ಸಾಧ್ಯತೆ
✔ ಸ್ಥಿರ ಮತ್ತು ವಿಶ್ವಾಸಾರ್ಹ ಸಂಸ್ಥೆಯಲ್ಲಿ ಅನುಭವ
ಬೆಂಗಳೂರು ಪ್ರದೇಶದ ಅಭ್ಯರ್ಥಿಗಳಿಗೆ ಇದು ಅತ್ಯಂತ ಅನುಕೂಲಕರ ಅವಕಾಶವಾಗಿದ್ದು, ಸ್ಥಳೀಯರಿಗೆ ಪ್ರಯೋಜನಕಾರಿಯಾಗಿದೆ.
ಪ್ರಮುಖ ಲಿಂಕ್‌ಗಳು
ಅಧಿಕೃತ ಅಧಿಸೂಚನೆ ಮತ್ತು ಅರ್ಜಿ ನಮೂನೆ: RWF ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯ
ಅಧಿಕೃತ ವೆಬ್‌ಸೈಟ್: rwf.indianrailways.gov.in