Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

10ನೇ, 12ನೇ ಪಾಸ್ ಮಹಿಳೆಯರಿಗೆ 412 ಅಂಗನವಾಡಿ ಹುದ್ದೆಗಳು 2026 | WCD ಕಲಬುರಗಿ ನೇಮಕಾತಿ ಆರಂಭ

10ನೇ, 12ನೇ ಪಾಸ್ ಮಹಿಳೆಯರಿಗೆ ಭರ್ಜರಿ ಸರ್ಕಾರಿ ಅವಕಾಶ! 412 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ 2026 – ಅರ್ಜಿ ಪ್ರಕ್ರಿಯೆ ಆರಂಭವಾಗಿದೆ

ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಎಲ್ಲಾ ಮಹಿಳೆಯರಿಗೆ ಇದು ಒಂದು ನಿಜವಾಗಿಯೂ ಸುವರ್ಣಾವಕಾಶ. Women and Child Development Department Kalaburagi (WCD Kalaburagi) ವತಿಯಿಂದ 2026ನೇ ಸಾಲಿನ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ.

ಒಟ್ಟು 412 ಹುದ್ದೆಗಳು ಖಾಲಿ ಇದ್ದು, 10ನೇ ಮತ್ತು 12ನೇ ತರಗತಿ ಪಾಸ್ ಮಾಡಿದ ಅರ್ಹ ಮಹಿಳಾ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಹಿಳೆಯರಿಗೆ ಸಮೀಪದಲ್ಲೇ ಉದ್ಯೋಗ ದೊರೆಯುವ  ಒಂದು ಅವಕಾಶ ಇದು. ಸಮಾಜ ಸೇವೆಯ ಜೊತೆಗೆ ಹಾಗೂ ಸ್ಥಿರ ಆದಾಯ ಕೂಡ ಲಭ್ಯವಾಗುತ್ತದೆ.

 ನೇಮಕಾತಿ ಸಂಕ್ಷಿಪ್ತ ಮಾಹಿತಿ

ಇಲಾಖೆ ಹೆಸರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD)

ಜಿಲ್ಲೆ: ಕಲಬುರಗಿ – ಕರ್ನಾಟಕ

ಒಟ್ಟು ಹುದ್ದೆಗಳು: 412 ಹುದ್ದೆಗಳು

ಹುದ್ದೆಗಳ ಹೆಸರು: ಅಂಗನವಾಡಿ ಕಾರ್ಯಕರ್ತೆ & ಅಂಗನವಾಡಿ ಸಹಾಯಕಿ

ಅರ್ಜಿ ವಿಧಾನ: ಆನ್‌ಲೈನ್ ಮೋಡ್

ನೇಮಕಾತಿ ವರ್ಷ: 2026

ಈ ನೇಮಕಾತಿ ಪ್ರಕ್ರಿಯೆ ಮೂಲಕ ಮಹಿಳೆಯರಿಗೆ ಸರ್ಕಾರದ ಅಂಗನವಾಡಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯಲಿದೆ.

 ಹುದ್ದೆಗಳ ವಿಭಾಗವಾರು ವಿವರ

  •  ಅಂಗನವಾಡಿ ಕಾರ್ಯಕರ್ತೆ – 89 ಹುದ್ದೆಗಳು
  •  ಅಂಗನವಾಡಿ ಸಹಾಯಕಿ – 323 ಹುದ್ದೆಗಳು

400ಕ್ಕೂ ಹೆಚ್ಚು ಹುದ್ದೆಗಳು ಲಭ್ಯವಿರುವುದರಿಂದ ಹೆಚ್ಚಿನ ಅಭ್ಯರ್ಥಿಗಳಿಗೆ ಅವಕಾಶ ಸಿಗುವ ನಿರೀಕ್ಷೆಯಿದೆ.

 ಶೈಕ್ಷಣಿಕ ಅರ್ಹತೆ

ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು:

ಮಾನ್ಯತೆ ಪಡೆದ ಮಂಡಳಿ/ಸಂಸ್ಥೆಯಿಂದ 10ನೇ ಅಥವಾ 12ನೇ ತರಗತಿ ಪಾಸ್ ಆಗಿರಬೇಕು.

ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ಹೆಚ್ಚು ಞರುತ್ತದೆ.

ಹೆಚ್ಚಿನ ಅಂಕ ಪಡೆದವರಿಗೆ ಮೆರಿಟ್ ಪಟ್ಟಿಯಲ್ಲಿ ಉತ್ತಮ ಸ್ಥಾನ ಸಿಗುವ ಸಾಧ್ಯತೆ ಇದೆ.

ಅರ್ಜಿ ಸಲ್ಲಿಸುವ ಮೊದಲು ಶಿಕ್ಷಣ ಪ್ರಮಾಣಪತ್ರಗಳು ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

 ವಯೋಮಿತಿ ವಿವರ

ಕನಿಷ್ಠ ವಯಸ್ಸು: 18 ವರ್ಷ

ಗರಿಷ್ಠ ವಯಸ್ಸು: 35 ವರ್ಷ ಮೀರಬಾರದು

SC/ST/OBC ಹಾಗೂ ಇತರೆ ಮೀಸಲಾತಿ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋಮಿತಿ ಸಡಿಲಿಕೆ ಲಭ್ಯವಿರಬಹುದು.

ವಯಸ್ಸಿನ ಲೆಕ್ಕಾಚಾರ ಅಧಿಸೂಚನೆಯಲ್ಲಿ ನೀಡಿರುವ ದಿನಾಂಕದ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.

ಅಂಗನವಾಡಿ ಕೆಲಸದ ಜವಾಬ್ದಾರಿಗಳು

 ಅಂಗನವಾಡಿ ಕಾರ್ಯಕರ್ತೆ

  • ಅಂಗನವಾಡಿ ಕಾರ್ಯಕರ್ತೆಯರು ಗ್ರಾಮ ಅಥವಾ ವಾರ್ಡ್ ಮಟ್ಟದಲ್ಲಿ ಮಕ್ಕಳ ಪೋಷಣೆಯ ಪ್ರಮುಖ ಹೊಣೆಗಾರಿಕೆಯನ್ನು ವಹಿಸುತ್ತಾರೆ.
  • 0–6 ವರ್ಷದ ಮಕ್ಕಳ ಆರೈಕೆ
  • ಗರ್ಭಿಣಿ ಹಾಗೂ ತಾಯಂದಿರಿಗೆ ಪೌಷ್ಟಿಕ ಆಹಾರ ಸಲಹೆ
  • ಮಕ್ಕಳ ಬೆಳವಣಿಗೆ ಮೇಲ್ವಿಚಾರಣೆ
  • ಲಸಿಕೆ ಕಾರ್ಯಕ್ರಮಗಳಲ್ಲಿ ಸಹಕಾರ ನಿಡುವುದು
  • ಸರ್ಕಾರದ ಯೋಜನೆಗಳ ಜಾಗೃತಿ ಮೂಡಿಸುವುದು
 ಅಂಗನವಾಡಿ ಸಹಾಯಕಿ
  • ಸಹಾಯಕಿಯರು ಕಾರ್ಯಕರ್ತೆಗೆ ಸಹಕಾರ ನೀಡುತ್ತಾರೆ.
  • ಮಕ್ಕಳಿಗೆ ಆಹಾರ ತಯಾರಿ
  • ಕೇಂದ್ರದ ಸ್ವಚ್ಛತೆ
  • ಮಕ್ಕಳ ನೋಡಿಕೊಳ್ಳುವಲ್ಲಿ ಸಹಾಯ ಮಾಡುವುದು
  • ಈ ಹುದ್ದೆಗಳು ಕೇವಲ ಉದ್ಯೋಗವಲ್ಲ, ಸಮಾಜದ ಭವಿಷ್ಯ ನಿರ್ಮಾಣ ಮಾಡುವ ಜವಾಬ್ದಾರಿಯೂ  ಕೂಡಾ ಹೌದು.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?

ಈ ನೇಮಕಾತಿಯಲ್ಲಿ ಸಾಮಾನ್ಯವಾಗಿ:

  1. ಮೆರಿಟ್ ಲಿಸ್ಟ್ ಆಧಾರಿತ ದಲ್ಲಿ ಆಯ್ಕೆ
  2. ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿ ಪ್ರಕಟಣೆ
  3. ದಾಖಲೆ ಪರಿಶೀಲನೆ ಮಾಡುವುದು
  4. ಲೇಖಿತ ಪರೀಕ್ಷೆ ಇರುವ ಸಾಧ್ಯತೆ ಕಡಿಮೆ; ಆದರೂ ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಮಾಹಿತಿಯನ್ನು ಪರಿಶೀಲಿಸಬೇಕು.

 ಸಂಬಳ ಮತ್ತು ಮಾನಧನ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸರ್ಕಾರ ನಿಗದಿಪಡಿಸಿದ ಮಾನಧನ ನೀಡಲಾಗುತ್ತದೆ.

ಕಾರ್ಯಕರ್ತೆಯರಿಗೆ ಹೆಚ್ಚು ಮಾನಧನ ನೀಡಲಾಗುವುದು

ಸಹಾಯಕಿಯರಿಗೆ ಪ್ರತ್ಯೇಕ ಮಾನಧನ

ಇದರ ಜೊತೆಗೆ ಕೆಲವೊಂದು ಸರ್ಕಾರದ ಯೋಜನೆಗಳ ಪ್ರೋತ್ಸಾಹಧನ ಕೂಡ ಲಭ್ಯವಾಗಬಹುದು.

 ಪ್ರಮುಖ ದಿನಾಂಕಗಳು

ಅರ್ಜಿ ಪ್ರಾರಂಭ ದಿನಾಂಕ: 20-02-2026

ಕೊನೆಯ ದಿನಾಂಕ: 16-ಮಾರ್ಚ್-2026

ಕೊನೆಯ ದಿನಾಂಕದವರೆಗೆ ಕಾಯದೆ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. 

ಅರ್ಜಿ ಸಲ್ಲಿಸುವ ವಿಧಾನ – ಹಂತ ಹಂತವಾಗಿ

  1.  ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2.  ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಸಂಪೂರ್ಣ ಓದಿ.
  3.  ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
  4.  ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ನಮೂದಿಸಿ.
  5.   ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
  6.   ಅರ್ಜಿ ಶುಲ್ಕ (ಅಗತ್ಯವಿದ್ದರೆ) ಪಾವತಿಸಿ.
  7.   ಮಾಹಿತಿಯನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಿ.
  8.  ಸಲ್ಲಿಸಿದ ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಅಗತ್ಯ ದಾಖಲೆಗಳ ಪಟ್ಟಿ

  • 10ನೇ / 12ನೇ ತರಗತಿ ಅಂಕಪಟ್ಟಿ
  • ಜನನ ಪ್ರಮಾಣಪತ್ರ ಅಥವಾ ವಯಸ್ಸಿನ ದಾಖಲೆ
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
  • ನಿವಾಸ ಪ್ರಮಾಣಪತ್ರ
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಸಹಿ

ಅಂಗನವಾಡಿ ಕೇಂದ್ರಗಳ ಮಹತ್ವ

ಅಂಗನವಾಡಿ ಕೇಂದ್ರಗಳು ಮಕ್ಕಳ ಪೋಷಣೆ, ಆರೋಗ್ಯ ಮತ್ತು ಪ್ರಾಥಮಿಕ ಶಿಕ್ಷಣದ ಮೂಲಭೂತ ಹಕ್ಕು ಘಟಕಗಳಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಇವು ಮಕ್ಕಳ ಹಾಗೂ ತಾಯಂದಿರ ಆರೋಗ್ಯ ಸುಧಾರಣೆಗೆ ಪ್ರಮುಖ ಪಾತ್ರ ವಹಿಸುತ್ತವೆ.

ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುವುದರಿಂದ ಮಹಿಳೆಯರು ಸಮಾಜದಲ್ಲಿ ಗೌರವಾನ್ವಿತ ಸ್ಥಾನ ಪಡೆಯುತ್ತಾರೆ.

 ಯಾರು ಅರ್ಜಿ ಹಾಕಬಹುದು?

10ನೇ ಅಥವಾ 12ನೇ ಪಾಸ್ ಮಹಿಳೆಯರು

ಸ್ಥಳೀಯ ನಿವಾಸಿಗಳು

ಮಕ್ಕಳೊಂದಿಗೆ ಕೆಲಸ ಮಾಡಲು ಆಸಕ್ತಿ ಇರುವವರು

ಸಮಾಜ ಸೇವಾ ಮನೋಭಾವ ಹೊಂದಿರುವವರು

ಮುಖ್ಯ ಸೂಚನೆಗಳು

ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದುವುದು ಕಡ್ಡಾಯ.

ತಪ್ಪು ಮಾಹಿತಿ ನೀಡಿದರೆ ಅರ್ಜಿ ತಿರಸ್ಕರಿಸಲಾಗಬಹುದು.

ಕೊನೆಯ ದಿನಾಂಕದ ಬಳಿಕ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.

 ಉಪಯುಕ್ತ ಲಿಂಕ್‌ಗಳು

ಕಿರು ಅಧಿಸೂಚನೆ PDF – ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯ

ಅರ್ಜಿ ಸಲ್ಲಿಸುವ ಲಿಂಕ್ – ಆನ್‌ಲೈನ್ ಪೋರ್ಟಲ್ ಮೂಲಕ

ಅಧಿಕೃತ ವೆಬ್‌ಸೈಟ್: karnemakaone.kar.nic.in